ಜಾಗತಿಕ ಬಂಡವಾಳ ಹೂಡಿಕೆ ವಿರೋಧಿಸಿ ಬೆಂಗಳೂರು ಚಲೋ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ - ಪೂಜಾರ
ಸಿಂಧನೂರು, ಅಕ್ಟೋಬರ್ 28 : ಬೆಂಗಳೂರಿನಲ್ಲಿ ನ.2 ,3 ,4 ರಂದು ನಡೆಯುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ವಿರೋಧಿಸುತ್ತಿದ್ದೆವೆ ಆದ ಕಾರಣ ರೈತರು ,ಕಾರ್ಮಿಕರು, ದಲಿತರು ,ನಾಗರಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ರೈತ ( ಎಐಕೆಕೆಎಸ್ ) ಸಂಘ ರಾಜ್ಯದ್ಯಕ್ಷರಾದ ಡಿ.ಎಚ್.ಪೂಜಾರ ಕರೆ ನೀಡಿದರು.
ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿ ಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಉದ್ಯೋಗ ಸೃಷ್ಟಿಯ ನೆಪದಲ್ಲಿ ರಾಜ್ಯದ ಫಲವತ್ತಾದ ಭೂಮಿ ಭೂಮಿ ,ನೀರು ,ವಿದ್ಯುತ್ ನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡಲು ಮತ್ತು ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಕಾರ್ಮಿಕರನ್ನು ಕಾರ್ಪೊರೇಟ್ ಕಂಪನಿಗಳ ಗುಲಾಮರನ್ನಾಗಿ ಮಾಡಲು ರಾಜ್ಯ ಸರ್ಕಾರ ನಡೆಸುತ್ತಿರುವ ಸಮಾವೇಶ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇರಿ ಬೃಹತ್ ಪ್ರಮಾಣದ ಪ್ರತಿಭಟನೆ ಸಮಾವೇಶ ಯಶಸ್ವಿಗೊಳಿಸಬೇಕೆಂದರು.
ಜಾಗತಿಕ ಕಂಪನಿಗಳ ಹಣ ಹೂಡಿಕೆ ಮಾಡುವಂತಹ ಈ ಸಮಾವೇಶ ರಾಜ್ಯಕ್ಕೆ ಹೊಸದೇನಲ್ಲ ಇಂತಹ ಅದೆಷ್ಟೋ ಸಮಾವೇಶ ಗಳು ನಡೆದು ಹೋಗಿವೆ ಆದರೆ ಉದ್ಯೋಗ ಸೃಷ್ಟಿ ಯಾಗುತ್ತವೆ ಎಂಬ ಭ್ರಮೆಯಲ್ಲಿದ್ದ ಜನರಿಗೆ ಸುಳ್ಳಿನ ಭರವಸೆ ನೀಡಿದ್ದಾರೆ .ಹಣ ಹೂಡಿಕೆದಾರ ಸಮಾವೇಶ ನಡೆಸುವ ಪೂರ್ವದಲ್ಲಿ ರಾಜ್ಯದ ಮುಖ್ಯಮಂತ್ರಿ ಗಳು ,ಕೈಗಾರಿಕಾ ಸಚಿವರು ಹಾಗೂ ಉನ್ನತಾಧಿಕಾರಿಗಳು ದೇಶ ದೇಶ ಸುತ್ತಿ ನಮ್ಮತ್ತಿರ ಇಷ್ಟು ಭೂಮಿ ಇದೆ ಇನ್ನಷ್ಟು ಭೂಮಿಯನ್ನು ರೈತರಿಂದ ಕಿತ್ತಿಕೊಂಡು ಸಾವಿರಾರು ಎಕರೆ ಪ್ರದೇಶ ,ಕಡಿಮೆ ದರದಲ್ಲಿ ಭೂಮಿ, ನೀರು ,ವಿದ್ಯುತ್ ನೀಡುತ್ತೆವೆಂದು ಕಾರ್ಪೊರೇಟ್ ಕಂಪನಿಗಳ ಮುಂದೆ ವಿವಿಧ ರಾಜ್ಯಗಳು ತಾ ಮುಂದು ,ನಾ ಮುಂದು ಎಂದು ಕೈ ಕಟ್ಟಿ ನಿಲ್ಲುವದರ ಪರಿಣಾಮವೆ ಬೆಂಗಳೂರಿನ ಈ ಸಮಾವೇಶ .
ಹಣ ಹೂಡಿಕೆ ಸಮಾವೇಶದಿಂದ ಏಜೆಂಟ್ ,ಕಂಪನಿಗಳಿಗೆ ಲಾಭವಾಗುತ್ತದೆ ಹೊರತು ಯಾವುದೇ ಉದ್ಯೋಗ ಸೃಷ್ಟಿ ಯಾಗುವದಿಲ್ಲ ಅಪಾರ ಪ್ರಮಾಣದಲ್ಲಿ ರೈತರ ಭೂಮಿ ಕಳೆದುಕೊಳ್ಳುತ್ತಾರೆ ಕಾರ್ಮಿಕರ ಶೋಷಣೆ ಇನ್ನೂ ಹೆಚ್ಚಾಗುತ್ತದೆ ಇಂತಹ ಸಮಾವೇಶಗಳು ರಾಜ್ಯದಲ್ಲಿ ಬೇಡ ಎಂದು ದೇವನಹಳ್ಳಿ ತಾಲೂಕಿನ ಚನ್ನಪಟ್ಟಣ ಕುಂದಾಣ ಹೋಬಳಿ ,ದೊಡ್ಡ ಬಳ್ಳಾಪುರ ತಾಲೂಕಿನ ದೊಡ್ಡ ಬೆಳವಂಗಲ್ ಹೋಬಳಿ ,ಕಸಾಬಾ ಹೋಬಳಿಯ ಗ್ರಾಮಗಳಲ್ಲಿನ ಭೂಮಿಗಳನ್ನು ಬಲತ್ಕಾರದಿಂದ ಭೂ ಸ್ವಾಧೀನ ಮಾಡಿಕೊಳ್ಳುವದನ್ನು ಕೂಡಲೇ ನಿಲ್ಲಿಸಿ ರೈತರು ,ದಲಿತರು ,ಸ್ವಾಧೀನದಲ್ಲಿರುವ ಕೃಷಿ ಭೂಮಿಗಳನ್ನು ಸಕ್ರಮ ಮಾಡಬೇಕು ಮತ್ತು ವಿದ್ಯುತ್ ಕ್ಷೇತ್ರದ ಖಾಸಗಿಕರಣ ನಿಲ್ಲಬೇಕು , ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದು ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಬಾರದೆಂದು ಆಗ್ರಹಿಸುತ್ತಾ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಂಡರು.
Comments
Post a Comment